ಕ್ಯಾಟಲೇಸುಗಳು

 	ಕಬ್ಬಿಣ-ಪಾರ್ಫಿರನ್ ಎನ್ಜೈಮ್ಗಳಲ್ಲಿ ಒಂದು ಸಮೂಹಕ್ಕೆ ಸೇರಿದವು. ಇವು ಆಮ್ಲಜನಕ ಬೇಕಾದ ಜೀವಿಗಳಲ್ಲೆಲ್ಲ ಇವೆ. ಕೆಲವು ಕ್ಯಾಟಲೇಸುಗಳನ್ನು ಸ್ಫಟಿಕೀಕರಿಸಲಾಗಿದೆ. ಇವುಗಳ ಬಣ್ಣ ಕೆಂಪು ಛಾಯೆಯ ಕಂದು. ಅಣುತೂಕ 2,25,000-2,50,000. ಒಂದು ಅಣುವಿನಲ್ಲಿ ನಾಲ್ಕು ಹೀಮ್ ಗುಂಪುಗಳಿವೆ. ಇದರಲ್ಲಿ ಕಬ್ಬಿಣ ಫೆರಿಕ್ ಸ್ಥಿತಿಯಲ್ಲಿರುವುದು. ಈ ಎನ್eóÉೈಮು ಹೈಡ್ರೋಜನ್ ಪೆರಾಕ್ಸೈಡಿನ ಮತ್ತು ಕಾರ್ಬನಿಕ್ ಹೈಡ್ರಾಪೆರಾಕ್ಸೈಡುಗಳ ವಿಭಜನೆಯಲ್ಲಿ ಪಾತ್ರವಹಿಸುತ್ತದೆ. ಇದರ ಒಂದು ಅಣು 0 ಡಿಗ್ರಿ ಸೆಂ. ನಲ್ಲಿ ಒಂದು ಮಿನಿಟಿಗೆ 44,000 ಪೆರಾಕ್ಸೈಡ್ ಅಣುಗಳನ್ನು ವಿಭಜಿಸಬಲ್ಲದು.                (ಎಂ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ